ಇಂಡಿಯನ್ ಮರ್ಚೆಂಟ್ಸ್ ಚೇಂಬರ್ -
ಈ ಸಂಸ್ಥೆಯಲ್ಲಿ 1740ಕ್ಕೂ ಮಿಕ್ಕು ಸದಸ್ಯರಿದ್ದಾರೆ. ಜವಳಿ, ರೇಷ್ಮೆ, ಎಂಜಿನಿಯರಿಂಗ್ ವಸ್ತುಗಳು, ಲೋಹ, ರಾಸಾಯನಿಕ ವಸ್ತುಗಳು, ಹತ್ತಿ, ಬ್ಯಾಂಕಿಂಗ್, ವಿಮೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ, ಬೊಂಬಾಯಿ ನಗರ, ಮಹಾರಾಷ್ಟ್ರ ಮತ್ತು ಗುಜರಾತಿನ ಉದ್ಯಮಪತಿಗಳನ್ನೂ ವಾಣಿಜ್ಯಸಂಘಗಳನ್ನೂ ಈ ಸಂಸ್ಥೆಯ ಸದಸ್ಯತ್ವ ಒಳಗೊಂಡಿದೆಯಲ್ಲದೆ ಅನೇಕ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಇದು ನೇರವಾಗಿ ಭಾಗವಹಿಸುತ್ತದೆ. ನಾಡಿನ ವಾಣಿಜ್ಯ ಕೈಗಾರಿಕೆಗಳಿಗೆ ಸಂಬಂಧಿಸಿದ ನಾನಾ ಸಮಸ್ಯೆಗಳ ಪರಿಹಾರ ಹಾಗೂ ಕ್ಷೇತ್ರದ ಹಿತರಕ್ಷಣೆಗಾಗಿ ಶ್ರಮಿಸುತ್ತಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ಅಗತ್ಯವಾದ ಸಿಬ್ಬಂದಿಯ ತರಬೇತಿಗಾಗಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ದೇಶಾದ್ಯಂತ ವಾಣಿಜ್ಯ ಪರೀಕ್ಷೆಗಳನ್ನು ನಡೆಸಿ ಡಿಪ್ಲೊಮಾಗಳನ್ನು ನೀಡುತ್ತಿದೆ.			
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ